1999 ರಲ್ಲಿ ಒಂದು ಬೆಳಿಗ್ಗೆ ಹಸಿರು ದೀಪದ ದೊಡ್ಡ ಕಾರು ನಮ್ಮ ಮನೆ ಅಂಗಳದಲ್ಲಿ ಬಂದು ನಿಂತಿತು, ಕೆಂಪು ದೀಪ ಮಂತ್ರಿ ಮಹೋದಯರದ್ದು ಎಂಬುದು ಗೊತ್ತಿತ್ತು ಆದರೆ ಇದು ಹಸಿರು ದೀಪ ಪತ್ರಿಕೆ ಓದುತ್ತಿದ್ದ ನನಗೆ ಕುತೂಹಲ, ಕಾರಿಂದ ಇಳಿದ ವರು ಹಸಿರು ಶಾಲು ಹೊದ್ದ ಪ್ರೊಪೆಸರ್ ನಂಜುಂಡಸ್ವಾಮಿ, ಕೋಡಿ ಹಳ್ಳಿ ಚಂದ್ರಶೇಖರ್ ಮತ್ತು ಸಾಗರದ ರೈತ ಹೋರಾಟ ಪತ್ರಿಕೆ ಸಂಪಾದಕರಾದ ವಸಂತ ಕುಮಾರ್.
ಅವತ್ತು ನನಗಾದ ಸಂತೋಷ ಹೇಳಲಿಕ್ಕೆ ಸಾಧ್ಯವಿಲ್ಲ, ನನ್ನ ತಂದೆ ರೈತ ಹೋರಾಟದ ಹಸಿರು ಶಾಲು ಹೊದ್ದವರು, ಪೋಪೆಸರ್ ಜೈಲ್ ಬರೋ ಕರೆಯಿಂದ ಪ್ರೇರೇಪಿತರಾಗಿ ಜೈಲಿಗೆ ಹೋಗಿ ಬಂದವರು, ಅವರು ಜಿಲ್ಲೆಯಲ್ಲಿ ನಂಜುOಡಸ್ವಾಮಿಯವರ ಸಭೆ ಎಲ್ಲೇ ಇದ್ದರು ಹೋಗಿ ಕೇಳಿ ಬಂದು ಅದನ್ನ ಬಹಳ ದಿನ ವಿಮಷೆ೯ ಮಾಡುತ್ತಿದ್ದರು ಇದೆಲ್ಲ 1983ರ ಹಾಗೂ 1986ರ ಘಟನೆಗಳು.
ನನ್ನ ತಂದೆಯ ಆರಾಧ್ಯ ರೈತ ನಾಯಕರು ಮನೆಗೆ ಬಂದದ್ದು ಕಾಯಿಲೆ ಮತ್ತು ವೃದ್ದಾಪ್ಯದ ಅವರಿಗೆ ಲವಲವಿಕೆ ಉತ್ಸಾಹ ಉಂಟು ಮಾಡಿತು, ಗಣ್ಯರು ಬಂದಾಗ ಅವರಿಗೆ ಅಪಿ೯ಸುವ ಹಾರ ತಂದು ಪ್ರೊಪೆಸರ್ಗೆ ಹಾಕಿದರು ಆ ಸಂದಭ೯ದಲ್ಲಿ ಹಾರ ಹಾಕಿಸಿಕೊಂಡ ಪ್ರೊಪೆಸರ್ ಹೇಳಿದ್ದು ನಾನು ಯಾರಿಂದಲೂ ಹಾರ ಹಾಕಿಸಿ ಕೊಳ್ಳುವುದಿಲ್ಲ ಆದರೆ ಇವತ್ತು ನಿಮ್ಮ ತಂದೆ ಅಭಿಮಾನಕ್ಕೆ ನಿರಾಕರಿಸಲಾಗಲಿಲ್ಲ.
ಚಹಾ, ಸಿಗರೇಟು ಸೇವನೆಯ ಜೊತೆ ನಡೆದ ಸಂಬಾಷಣೆ ಇವತ್ತು ನಿಮ್ಮ ಪಶು ಸಂಗೋಪನೆ ಲೆಕ್ಕಾಚಾರ ನೋಡಿದಾಗ ನೆನಪಾಯಿತು.
ಅವರು ಹೇಳಿದ್ದು 1999ರಲ್ಲಿ "ಇವತ್ತು ಭತ್ತ ಬೆಳೆಯುವ ರೈತ ಎಕರೆಗೆ 2500 ನಷ್ಟ ಮಾಡಿ ಕೊಳ್ಳುತ್ತಿದ್ದಾನೆ ಆದರೆ ಅವನಿಗೆ ಖಚು೯ ವೆಚ್ಚದ ಅರಿವೆ ಇಲ್ಲ, ಅವನ ಕೂಲಿ, ಗೊಬ್ಬರ, ಎತ್ತಿನ ಬೇಸಾಯ ಲೆಖ್ಕ ಮಾಡುತ್ತಿಲ್ಲ ಆದರೆ ಮುಂದಿನ ದಿನದಲ್ಲಿ ರೈತನ ಮಗ ಕಂಪ್ಯೂಟರ್ ಬಳಸುತ್ತಾನೆ ಪ್ರತಿಯೊಂದು ಪೈಸೆಗೂ ಲೆಖ್ಕ ಬರೆಯುತ್ತಾನೆ ಆಗ ಅವನಿಗೆ ಈ ನಷ್ಟ ಅರಿವಾಗುತ್ತಾನೆ ಆಗ ಅವನು ಭತ್ತ ಬೆಳೆಯುವುದು ನಿಲ್ಲಿಸುತ್ತಾನೆ" ಅಂದಿದ್ದರು ಇದು ಇವತ್ತು ನನ್ನ ಎದುರು ಸತ್ಯವಾಗಿ ಕೃಷಿ ಅಲ್ಲದಿದ್ದರೂ ಕೃಷಿಯ ಬಾಗವಾದ ಹೈನುಗಾರಿಕೆಯಲ್ಲಿ ನಿಮ್ಮಿ೦ದ ನೆನಪಾಯಿತು.
ಇದಕ್ಕೆ ಪರಿಹಾರ?ಅನ್ನುವ ನನ್ನ ಪ್ರಶ್ನೆಗೆ ಅವರ ಉತ್ತರ " ಬೀಳುಬೀಳುವ ಸಾವಿರಾರು ಎಕರೆ ಸಾಗುವಳಿ ಮಾಡುವ ಕಾಪೊ೯ರೇಟ್ ಕಂಪನಿಗಳು ಖರೀದಿಸುತ್ತವೆ ಅಲ್ಲಿ ನಮ್ಮ ರೈತ ಕೂಲಿಯಾಗಿ ಕೆಲಸಕ್ಕೆ ಸೇರುತ್ತಾನೆ ಅದಕ್ಕೆ ಅನುಕೂಲವಾದ ಕಾನೂನು ನಮ್ಮ ಪ್ರತಿನಿದಿಗಳು ಮಾಡುತ್ತಾರೆ".
ಪ್ರೊಪೆಸರ್ ನಂಜುಂಡಸ್ವಾಮಿ ಎಂಬ ರೈತ ನಾಯಕರ ಚಿಂತನೆ ನಿಜವಾಗುತ್ತಿರುವ ಸೂಚನೆಗಳ ನೋಡಿ ನನಗೆ ಭಯ ಆಗುತ್ತಿದೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment