* ಪುತ್ತೂರಿನ ಪ್ರತಿಷ್ಠಿತ ಉದ್ದಿಮೆ ಮಾಸ್ಟ್ ರ್ ಫ್ಲಾನೆರಿ *
2011ರಲ್ಲಿ ನಮ್ಮ ಲಾಡ್ಜ್ ಮತ್ತು ಕಾಟೇಜ್ ನಿಮಾ೯ಣ ಸಂದಭ೯ದಲ್ಲಿ ಈ ಸಂಸ್ಥೆಯಿ೦ದ ಸಿಮೆಂಟ್ ಬಾಗಿಲು, ಕಿಟಕಿ ಮತ್ತು ವಾಡ್೯ ರೋಬ್ಗಳನ್ನ ಇವರಿಂದ ಖರೀದಿಸಿದ್ದೆ, ಮೊನ್ನೆ ನಮ್ಮ ಹೊಸ ಕಟ್ಟಡಕಾಗಿ ಇಲ್ಲಿಗೆ ಹೋಗಿದ್ದೆ.
ಈ ಸಂಸ್ಥೆ ಮರದಿಂದ ನಿಮಿ೯ಸುವ ಎಲ್ಲಾ ವಸ್ತುಗಳನ್ನ ಸಿಮೆಂಟ್ ನಿಂದ ನಿಮಿ೯ಸುವ ಕೌಶಲ್ಯ ಹೊಂದಿದೆ.
ದೇಶದಾದ್ಯಂತ ರೈಲ್ವೆ, ಅರಣ್ಯ ಇಲಾಖೆಗಳಿಗೆ ಇವರ ಉತ್ಪನ್ನ ಸರಭರಾಜು ಆಗುತ್ತಿರುತ್ತದೆ.
ದಿಡೀರ್ ನಿಮಿ೯ಸುವ ಮನೆ, ಟಾಯಿಲೆಟ್, ಕೃಷಿ ಬೋರ್ ವೆಲ್ ಗಳಿಗೆ ಕಾಂಕ್ರಿಟ್ ಸ್ವಿಚ್ ಬೋಡ್೯ಗಳು ಹೀಗೆ ಇಲ್ಲಿ ಏನುOಟು ಏನಿಲ್ಲ !,ಮರದಲ್ಲಿ ವಾಡ್೯ ರೋಬ್ ಮಾಡಲು ಕನಿಷ್ಟ 700 ರೂಪಾಯಿ ಚದರ ಅಡಿಗೆ ಬೇಕು ಅದೇ ಇವರ ಕಾಂಕ್ರಿಟ್ ನಲ್ಲಿ 4OO ರಿಂದ 500 ರೂಪಾಯಿಯಲ್ಲಿ ಆಗುತ್ತೆ ಆದರೆ ಇದು ಲಡ್ಡಾಗುವುದಿಲ್ಲ, ಒರಲೆ ತಿನ್ನುವುದಿಲ್ಲ ಮೈoಟೆನೆನ್ಸ್ ಪ್ರೀ.
ಆನಂದ್ ಎಂಬುವವರು ಪ್ರಾರಂಬಿಸಿದ ಈ ಸಂಸ್ಥೆಯಲ್ಲಿ ನೂರಾರು ಕುಟುಂಬ ಉದ್ಯೋಗ ಮಾಡುತ್ತಿದೆ, ಅವರಿಗೆ ಊಟ / ವಸತಿ ವ್ಯವಸ್ಥೆ, ಕಾಮಿ೯ಕರಿಗಾಗಿಯೇ ಸಹಕಾರಿ ಮಾಲ್ ನಿಮಿ೯ಸಲಾಗಿದೆ.
ಕಾಮಿ೯ಕರ ಮಕ್ಕಳಿಗೆ ವಿದ್ಯಾಭ್ಯಾಸ, ಊಟ ವಸತಿ ವ್ಯವಸ್ಥೆ ಕೂಡ ಅತ್ಯುತ್ತಮವಾಗಿ ಮಾಡಿದ್ದಾರೆ.
ಮಹಿಳಾ ಸಿಬ್ಬಂದಿಗಳು ಇಲ್ಲಿ ತಯಾರು ಮಾಡುವ ಉತ್ಪನ್ನಗಳನ್ನ ತಯಾರಿಸುವ ಕುಶಲತೆ ಹೊಂದಿರುವ ತರಬೇತಿ ನೀಡಿದ್ದಾರೆ.
ಇವರ ಪುತ್ರರಾದ ಅಕ್ಷಯ್ ಮತ್ತು ಆಕಾಶ್ ರನ್ನ ಇಲ್ಲಿನ ಹಿರಿಯ ಪ್ರೊಡಕ್ಷನ್ ಮ್ಯಾನೇಜರ್ ಚಂದ್ರಶೇಖರ್ ಪರಿಚಯಿಸಿದರು ಹಾಗೆ ಇಡೀ ಪ್ಯಾಕ್ಟರಿ ತೋರಿಸಿದರು.
ಇವರ ಉದ್ದಿಮೆ ಅನೇಕ ಪರಿಸರ ಪ್ರಶಸ್ತಿ ಪಡೆದಿದೆ, ಪುತ್ತೂರಿನ ಹಿರಿಮೆ ಮತ್ತು ಗರಿಮೆಗೆ ಈ ಉದ್ದಿಮೆ ಒಂದು ಕಿರಿಟ ಪ್ರಾಯ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment