#ದುಗ೯ಮ ಹಳ್ಳಿಯಲ್ಲಿ ಜನಿಸಿ ದೊಡ್ಡ ಉದ್ದಿಮೆದಾರರಾಗಿ ಆನಂದಪುರಂನ ಘನತೆ ಹೆಚ್ಚಿಸಿದ್ದ ಸುಬ್ರಾವ್#
ಆನಂದಪುರಂನ ಸಂತೋಷ್ ರೈಸ್ ಇಂಡಸ್ಟ್ರಿಸ್ ಬೃಹತ್ ಅಕ್ಕಿ ಅವಲಕ್ಕಿ ಗಿರಣಿ ಮತ್ತು ಸಂತೋಷ್ ಆಗ್ರೋ ಎಂಬ ಬೃಹತ್ ಕೋಲ್ಡ್ ಸ್ಟೋರೇಜ್ ಗಳ ಮಾಲಿಕರಾದ ಶ್ರೀ ಸುಬ್ಬ ರಾವ್ ಇವತ್ತು ಇಹಲೋಕ ತ್ಯಜಿಸಿದ್ದಾರೆ.
ಇವರ ಜೀವನದ ಹಾದಿ ಅತ್ಯಂತ ದುಗ೯ಮ, ಸಾಗರ ತಾಲ್ಲೂಕಿನ ಆನ೦ದಪುರಂ ಹೋಬಳಿಯ ಬಳ್ಳಿ ಬೈಲು ಗ್ರಾಮದ ಕೊಂಗನಾಸಳ್ಳಿ ಎಂಬ ಹಳ್ಳಿಯ ಮಧ್ಯಮ ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಇವರು ಆನಂದಪುರಂನಲ್ಲಿ ವಿದ್ಯಾ ಮಂತ್ರಿ ಬದರಿನಾರಾಯಣ್ ಅಯ್ಯOಗಾರ್ ಕುಟುಂಬದವರು ಪ್ರಾರಂಬಿಸಿದ ಪಿಯುಸಿ ತರಗತಿಯ ಪ್ರಥಮ ಬ್ಯಾಚ್ ನಲ್ಲಿ ಸೈನ್ಸ್ ನಲ್ಲಿ ಉತ್ತಿಣ೯ರಾದ ಏಕೈಕ ವಿದ್ಯಾಥಿ೯ ಸುಬ್ಬ ರಾವ್.
ಕೊಂಗನಾಸಳ್ಳಿಯಿ೦ದ ಆನಂದಪುರಕ್ಕೆ ರಸ್ತೆ ಇರಲಿಲ್ಲ, ದಟ್ಟ ಕಾಡು ಹಾಗಾಗಿ ಸುಬ್ಬರಾವ್ ಆನಂದಪುರದ ಅಗ್ರಹಾರದ ರಾಮ ಮಂದಿರ ಮತ್ತು ಅದರ ಸಮೀಪ ಬಾಡಿಗೆ ಕೊಠಡಿಯಲ್ಲಿ ವಿದ್ಯಾಭ್ಯಾಸ ಮಾಡಿದವರು.
ಊರಿನ ಹಿರಿಯರಾದ ಅದ್ಯಾಪಕರಾದ ಶ್ರೀ ಬೋಜರಾಜ್ ಅಯ್ಯOಗಾರ್, ಆನಂದಪುರದ ಅಭಿವೃದ್ಧಿಗೆ ಕಾರಣಕತ೯ರಾದ ಗಾಂಧಿವಾದಿ ಶಿಕ್ಷಕ ಎಸ್.ಆರ್.ಕೃಷ್ಣಪ್ಪ ಇವರಿಗೆ ಅನೇಕ ರೀತಿ ಸಹಕಾರ ನೀಡಿದವರು.
ಪಿಯುಸಿ ಓದುವಾಗ ನಮ್ಮ ಅಣ್ಣ ಕೆ.ನಾಗರಾಜ್ ಇವರ ಕ್ಲಾಸ್ ಮೇಟ್ ಹಾಗಾಗಿ ಕೆಲ ಸಂಜೆ ನಮ್ಮ ಮನೆಗೆ ಇವರು ಬರುತ್ತಿದ್ದರು.
ನಂತರ ರೈತ ಬಂದು ಗ್ರಾಮೋದ್ಯೋಗದ ಸುಬ್ಬಣ್ಣನಾಯ್ಕರ ಅಕ್ಕಿ ಗಿರಣಿಯಲ್ಲಿ ಗುಮಸ್ತರಾಗಿ ಕೆಲಸ ಪ್ರಾರಂಬಿಸಿ ನಂತರ ಅವರ ನಂಬಿಗೆಯ ಬ೦ಟರಾಗಿ ವ್ಯವಸ್ಥಾಪಕರಾಗಿ ಮುಂದೆ ಸುಬ್ಬಣ್ಣಾ ನಾಯ್ಕರು ಉದ್ಧಿಮೆಯಿಂದ ನಿವೃತ್ತಿ ಘೋಷಿಸಿದಾಗ ಆನಂದಪುರದ ಬೃಹತ್ ಅಕ್ಕಿ ಮತ್ತು ಅವಲಕ್ಕಿ ಗಿರಣಿಯನ್ನ ಸುಬ್ಬರಾವ್ ಗೆ ವಹಿಸಿ ನಂತರ ಸುಬ್ಬರಾವ್ ಗೆ ಮಾರಾಟ ಮಾಡುತ್ತಾರೆ.
ನಂತರ ಸುಬ್ಬರಾವ್ ಇಡೀ ಅಕ್ಕಿ ಗಿರಣಿಯನ್ನ ಮಾದರಿ ಅಕ್ಕಿ ಗಿರಣಿಯಾಗಿ ಬದಲಿಸುತ್ತಾರೆ, ವೈಜ್ಞಾನಿಕವಾಗಿ ಆಧುನಿಕರಣ ಮಾಡಿ ದೊಡ್ಡ ಪ್ರಮಾಣದಲ್ಲಿ ಗುಣಮಟ್ಟದ ಅಕ್ಕಿ, ಅವಲಕ್ಕಿ ಉತ್ಪಾದನೆ ಮತ್ತು ಮಾರಾಟ ಮಾಡಿ ಅಂತರ್ ರಾಜ್ಯದಲ್ಲಿ ಹೆಸರಾಂತ ಉದ್ದಿಮೆದಾರರಾಗಿ ಹೆಸರು ಮಾಡುತ್ತಾರೆ.
ಅಡಿಕೆ ಕೃಷಿಯಲ್ಲಿ ಕೂಡ ಯಶಸ್ವಿ ಆಗುತ್ತಾರೆ, ನಂತರ ಜಿಲ್ಲೆಯ ಮೊದಲ ಬೃಹತ್ ಕೋಲ್ಡ್ ಸ್ಟೋರೇಜ್ ನಿಮಿ೯ಸಿ ಈ ಭಾಗದ ಒಣ ಶುಂಠಿ ವ್ಯಾಪರಸ್ಥರಿಗೆ ಅನುಕೂಲ ಮಾಡಿದ್ದರಿಂದ ಆನಂದಪುರಂ ಶುಂಠಿ ಉದ್ಯಮದ ಹಬ್ ಆಗಲು ಕಾರಣಕತ೯ರಾದರು.
ಇತ್ತೀಚಿಗೆ ಸಣ್ಣ ವಯಸ್ಸಲ್ಲೇ ಅನಾರೋಗ್ಯದಿಂದ ಉದ್ಯಮದಿಂದ ಕ್ರಮೇಣ ನಿವೃತ್ತರಾದರು ಇದರಿಂದ ಆನಂದಪುರದಲ್ಲಿ ಮುಂದಿನ ದಿನಗಳಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸುವ ಇವರ ಅನೇಕ ಕನಸಿನ ಉದ್ದಿಮೆಗಳು ನಿಂತು ಹೋದವು.
ಆನಂದಪುರದ ಹಳ್ಳಿಯ ಕೃಷಿ ಕುಟುಂಬದ ಬಡ ಯುವಕ ಈ ಎಲ್ಲಾ ಕೈಗಾರಿಕಾ ಕ್ರಾಂತಿ ಮಾಡಿ ಮುಂದಿನ ದಿನದಲ್ಲಿ ಈ ಮಾಗ೯ದಲ್ಲಿ ಭವಿಷ್ಯ ಹುಡುಕುವ ಭಾವಿ ಉದ್ದಿಮೆದಾರರಿಗೆ ರೋಲ್ ಮಾಡೆಲ್ ಆಗಿದ್ದಾರೆ.
ದಿವಗಂತ ಸುಬ್ರಾವ್ ರ ಆತ್ಮಕ್ಕೆ ಸದ್ಗತಿ ಮತ್ತು ಸ್ವಗ೯ ಪ್ರಾಪ್ತಿಯು ಸಿಗಲಿ ಎಂದು ದೇವರಲ್ಲಿ ಪ್ರಾಥಿ೯ಸುತ್ತೇನೆ.
ಕೆ.ಅರುಣ್ ಪ್ರಸಾದ್
ಮಾಜಿ ಜಿಲ್ಲಾ ಪಂಚಾಯಿತ ಸದಸ್ಯ
ಆನಂದಪುರಂ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment