ಸ್ವಲ್ಪ ಕಾಯಿರಿ ನಿರಾಸೆ ಬೇಡ, ಬಿದಿರು ಬೆಳೆದಂತೆ ಮಲೆನಾಡಿನಲ್ಲಿ ನೀರು ಒರತೆ ಜಾಸ್ತಿ ಆಗುತ್ತಂತೆ.
ಬಿದಿರು 30 ವಷ೯ಕ್ಕೆ ಒಮ್ಮೆ ಬಿದಿರಕ್ಕಿ ನೀಡಿ ಸಾಯುತ್ತದೆ ಆಗ ಬರಗಾಲ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆಂದರೆ ಪ್ರತಿ 3o ವಷ೯ಕ್ಕೆ ಭೂಮಿ ಒಳಗೆ ನೀರಿನ ಸೆಲೆಗಳು ಬತ್ತುವುದಕ್ಕೆ ಏನೋ ಒಂದು ಪರಿಸರ ಚಕ್ರದ ಚಲನೆ ಇರಬೇಕು ಆಗಲೇ ಬಿದಿರು ವಂಶಾಭಿವೃದ್ಧಿ ಕಾಲ ಆಗುತ್ತದೆ ಪುನಃ ನಾಶವಾದ ಬಿದಿರು ಸಮೃದ್ಧವಾಗುವಾಗ ಮಳೆ ಬೆಳೆ ಕೂಡ ಸರಿ ಆಗುವ ಉದಾಹರಣೆ ಇದೆ.
50-100 ವಷ೯ದ ಹಿಂದೆ ಅರಣ್ಯ ನಾಶವಾಗದಿದ್ದಾಗಲೂ, ಡಿಸೇಲ್ ಪೆಟ್ರೋಲ್ ವಾಹನ ಬಳಕೆ ಕಡಿಮೆ ಇದ್ದಾಗಲೂ, ಕಾಬ೯ನ್ ಎಮಿಷನ್ ಇಷ್ಟಿಲ್ಲದಿದ್ದಾಗಲೂ ಈ ರೀತಿಯ ಬಿದಿರು ಅಕ್ಕಿ, ಬಿದಿರು ನಾಶ, ಬರಗಾಲದ ಚಕ್ರ ನಿರಂತರವಾಗಿದೆ.
ಈಗಿನ ಗ್ಲೋಬಲ್ ವಾಮಿ೯೦ಗ್, ಎಲ್ ನೀನೋ ಇತ್ಯಾದಿ ವಿದೇಶಿ ಸಂಶೋದನೆಯ ಬಗ್ಗೆಯೇ ಎಲ್ಲರೂ ಕೇಂದ್ರಿಕೃತರಾಗಿ ಚಚಿ೯ಸುತ್ತಿರುವುದರಿಂದ ನಮ್ಮ ಪ್ರಾಚೀನ ಅನುಭವಗಳ ಕಡೆಗಾಣಿಸಿದ್ದರಿಂದ ಈ ರೀತಿ ತಲ್ಲಣ ಗಾಭರಿ ಸಹಜ.
ಭೂಮಿಗೆ ಎಲ್ಲಾ ರೀತಿಯ ಸಮಸ್ಯೆಯ ದಾರಣೆ ಶಕ್ತಿ ಇದೆ, ಮಿತಿ ಮೀರಿದರೆ ಲಯಗೊಳಿಸಿ ಹೊಸ ಚಿಗುರು ಹೊರಡಿಸುವ ನಾವರಿಯದ ಜ್ಞಾನವೂ ಇದೆ.
ಈ ಬಗ್ಗೆ ಹೆಚ್ಚು ಸಂಶೋದನೆ ಚಚೆ೯ ಆಗಲಿ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment