#ಅಂಜಲಿ
#ಒಂಬತ್ತು_ವರ್ಷದ_ಹಿಂದೆ_ಈ_ದಿನ_ನಮ್ಮ_ಮನೆಗೆ_ಬಂದಿದ್ದಳು
#ಮೇ_17_2016
#ಅದೇ_ವರ್ಷದ_ಆಗಸ್ಟ್_15ಕ್ಕೆ_ಬಿಡುಗಡೆ_ಮಾಡಿದೆ
#monkey #anjali #memories #petlovers
ಅಂಜಲಿ ಅದು ನಾವಿಟ್ಟ ಹೆಸರು ಅವಳ ಹೆಸರು ಬೇರೆ ಇರಬೇಕು ಅವಳು ನಮ್ಮೂರು ಬಂದು ಸೇರಿ ಊರಿನ ಬಾಲಕರ ಗಮನ ಸೆಳೆದದ್ದು ಹೇಗಂದರೆ...
ಅವಳಿಗೆ ಮನುಷ್ಯರ ಸಹವಾಸ ಚೆನ್ನಾಗಿತ್ತು ಆದ್ದರಿಂದ ಮಕ್ಕಳೆಲ್ಲ ಕಡಲೆಕಾಯಿ ಬಾಳೆಹಣ್ಣು ತೋರಿಸಿದರೆ ಅವರ ಹತ್ತಿರ ಯಾವುದೇ ಭಯ ಇಲ್ಲದೆ ಬಂದು ಕೈಯಿಂದ ಸ್ವೀಕರಿಸಿ ಹೋಗುತ್ತಿದ್ದಳಂತೆ, ಇದರಿಂದ ಇವಳು ನಮ್ಮೂರಿನ ಲಾರಿ ಮಾಲೀಕರಾದ ಅಮೀರ್ ಸಾಹೇಬರ ಮಕ್ಕಳ ಜೊತೆಯಾಗಿ ಅವರ ಮನೆ ಸೇರಿದಳು.
ಆದರೆ ಅವಳು ಕೆಲವೊಮ್ಮೆ ಜನರಿಗೆ ಕಚ್ಚಲು ಬರುವುದು ಸಿಟ್ಟಾಗುವುದು ಇವೆಲ್ಲ ಅವಳ ನೆಗೆಟಿವ್ ಅಂಶಗಳಾಗಿತ್ತು, ಅಮೀರ್ ಸಾಹೇಬರು ಅವರ ಮಗನ ಹತ್ತಿರ ಇದನ್ನು ನನಗೆ ಸಾಕಲು ಕಳಿಸಿ ಕೊಟ್ಟಿದ್ದರು, ನನಗೂ ಮಂಗ ಒಂದನ್ನು ಸಾಕುವ ಆಸೆ ಪೂರೈಸಿರಲಿಲ್ಲ ಇದು ಹೆಣ್ಣು ಮಂಗ ಆಗಿತ್ತು ತಕ್ಷಣ ಇದಕ್ಕೊಂದು ಬೋನು- ಚೈನು, ಬೋನಿನಿಂದ ಹೊರ ಬಿಟ್ಟಾಗ ನಮ್ಮ ಹಲಸಿನ ಮರ ಅಮಟೆ ಮರ ಮೇಲೆ ಹತ್ತಿ ಇಳಿಯುವಷ್ಟು ಉದ್ದದ ಸೊಂಟಕ್ಕೆ ಹಗ್ಗ ಹೀಗೆ ಎಲ್ಲ ವ್ಯವಸ್ಥೆ ಆಯಿತು.
ನಿತ್ಯ ಬೆಳಿಗ್ಗೆ ತಿನ್ನಲು ಹಸಿ ಶೇಂಗಾ, ಬಾಳೆಹಣ್ಣು - ಕ್ಯಾರೆಟ್ -ಸೌತೆಕಾಯಿ -ಪೇರಲೆ ಹಣ್ಣು ಇತ್ಯಾದಿ ಸಂಗ್ರಹವಾಯಿತು ನಂತರ ಅಂಜಲಿ ಅನ್ನುವ ನಾಮಕರಣವಾಯಿತು.
ನಂತರ ಕೆಲವೊಮ್ಮೆಸಿಟ್ಟಾಗುವುದು ಕಚ್ಚಲು ಬರುವುದು ಇತ್ಯಾದಿ ಇದ್ದೇ ಇತ್ತು, ಇನ್ನೊಂದು ವಿಶೇಷ ಅಂದರೆ ಲಾಗ ಹಾಕು ಎಂದರೆ ಲಾಗ ಹೊಡೆದು ನಮ್ಮನ್ನೆಲ್ಲಾ ರಂಜಿಸುತ್ತಿದ್ದಳು ಒಮ್ಮೆ ಬೋನಿನಿಂದ ತಪ್ಪಿಸಿಕೊಂಡು ಇಡೀ ದಿನ ಮರಗಳ ಮೇಲೆ ಸುತ್ತುತ್ತಿದ್ದಳು, ತನ್ನ ಆಹಾರಕ್ಕೋಸ್ಕರ ಬಂದು ನನ್ನ ಹತ್ತಿರ ಕುಳಿತುಕೊಳ್ಳುತ್ತಿದ್ದಳು ಆದರೆ ಚೈನಿನಲ್ಲಿ ಬಂಧಿಸಲು ಹೋದರೆ ವಿರೋಧಿಸುತ್ತಿದ್ದಳು.
ಇವಳಿಗೆ ಯಾವಾಗಲೂ ಗದರಿಸುತ್ತಿದ್ದ ಕೀಟಲೆ ಮಾಡುತ್ತಿದ್ದ ನಮ್ಮ ಸಿಬ್ಬಂದಿ ಮಂಜುಳಮ್ಮನ ಕಂಡರೆ ಅಂಜಲಿಗೆ ಆಗುತ್ತಿರಲಿಲ್ಲ ಬೋನಿನ ಒಳಗಿನಿಂದಲೇ ಅವಳಿಗೆ ಗುಟುರು ಹಾಕುತ್ತಿದ್ದವಳು ಅವತ್ತು ಬೋನಿನಿಂದ ತಪ್ಪಿಸಿಕೊಂಡವಳು ದೂರದ ಮರದ ಮೇಲೆ ಇದ್ದವಳು ಮಂಜುಳಮ್ಮನ ನೋಡಿ ಮರದಿಂದ ಹಾರಿ ಬಂದು ಅವಳ ಕಾಲಿಗೇ ಕಚ್ಚಿತ್ತು.
ಇದರಿಂದ ನನ್ನ ಮೇಲೆ ಅಂಜಲಿ ಸಾಕಿದ ಕಾರಣದಿಂದ ಎಲ್ಲರೂ ಸಿಟ್ಟಾಗಿದ್ದರು, ಒಮ್ಮೆ ನಮ್ಮಲ್ಲಿ ಅತಿಥಿಯಾಗಿ ಬಂದ ಆಗಿನ ಬಳ್ಳಾರಿ ಸಂಸದರಾಗಿದ್ದ ಶ್ರೀರಾಮುಲು ಅವರು ಆಂಜನೇಯನನ್ನ ಬಂಧಿಸಿಡುವುದು ಸರಿಯಲ್ಲ ಎಂದಿದ್ದರು.
ಅದೇ ವರ್ಷ ನಮ್ಮ ಸಾಗರದ ಪೊಲೀಸ್ ಇಲಾಖೆಗೆ ಎ ಎಸ್ ಪಿ ಆಗಿ ಬಂದಿದ್ದ ಐಪಿಎಸ್ ಅಧಿಕಾರಿ ನಿಶಾ ಜೇಮ್ಸ್ ಒಮ್ಮೆ ಬಂದವರು ಇದು ಕಾನೂನು ಬಾಹಿರ ಆಗುತ್ತದೆ, ಯಾರಾದರೂ ದೂರು ನೀಡಿದರೆ ದೂರು ದಾಖಲಾಗುತ್ತದೆ ಆದ್ದರಿಂದ ಬಿಟ್ಟುಬಿಡಿ ಎಂದು ಸಲಹೆ ನೀಡಿದ್ದರು.
ಈ ಎಲ್ಲಾ ಕಾರಣಗಳಿಂದ ಅಂಜಲಿಯನ್ನು ಬಿಡುಗಡೆ ಮಾಡುವ ತೀರ್ಮಾನ ಮಾಡಿದೆ ಅದು ಆಗಸ್ಟ್ 15 2016 ಬೆಳಿಗ್ಗೆ ಊರಿಂದ ದೂರದಲ್ಲಿ ಬಿಟ್ಟು ಬಂದೆವು, ಅಂಜಲಿ ಬೋನಿನ ಬಾಗಿಲು ತೆಗೆದ ನಂತರ ನಮ್ಮ ಕಡೆ ತಿರುಗಿಯೂ ನೋಡದೆ ಓಡಿ ಹೋದಳು ಆ ಸಮಯದಲ್ಲಿ ನನಗೆ ನಿರಾಸೆ ಬೇಸರ ಆದರೂ ಅವಳ ಸ್ವಾತಂತ್ರ ಅವಳ ಹಕ್ಕು ಎಂಬ ನೆಮ್ಮದಿ ನಮ್ಮದು ಆಯ್ತು.
ಅವಳು ಸಮೀಪದ ಜನವಸತಿ ಕೇಂದ್ರಕ್ಕೆ ಹೋಗಿ ಅಲ್ಲಿಯೂ ಜನರ ಒಡನಾಟ ಪಡೆಯುತ್ತಾಳೆ ಯಾಕೆಂದರೆ ಅದು ಯಾರೋ ಸಾಕಿದ ತರಬೇತಿ ನೀಡಿದ ಮಂಗ ಇದಾದ್ದರಿಂದ ಎಂದು ನಾವು ಮಾತಾಡಿಕೊಂಡೆವು.
ಈಗಲೂ ಅಂಜಲಿ ನೆನಪಾಗುತ್ತಾಳೆ ಮನುಷ್ಯ ಮತ್ತು ಪ್ರಾಣಿಗಳ ಸಂಬಂದವೇ ಹೀಗೆ.
Comments
Post a Comment