ಹಂದಿಗೋಡು ನಿಗೂಡ ಕಾಯಿಲೆ
ಇವತ್ತು ಔಷದಿ ಕಂಡು ಹಿಡಿಯದ ಕಾಯಿಲೆ ಯಾವುದು ಎಂದರೆ ಏಡ್ಸ್ ಅನ್ನುತ್ತಾರೆ ಆದರೆ ನಮ್ಮ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಂದಿಗೋಡು ಎಂಬಲ್ಲಿ ಮೊದಲಿಗೆ ಕಂಡು ಬಂದ ಈ ಕಾಯಿಲೆಗೆ ಈವರೆಗೆ ಔಷದಿ ಕಂಡು ಹಿಡಿದಿಲ್ಲ, ಯಾವ ಕಾರಣದಿಂದ ಬರುತ್ತೆ ಎನ್ನುವ ಸಂಶೋದನೆಯು ಆಗಿಲ್ಲ. ವೈದ್ಯಲೋಕದಲ್ಲಿ ಹಂದಿ ಗೋಡು ನಿಗೂಡ ಕಾಯಿಲೆ ಎಂಬ ಹೆಸರು ಇಟ್ಟಿದ್ದಾರೆ.
ದೇಹದ ಸಂದುಗಳ ಮೂಳೆ ಅಡ್ಡಾ ದಿಡ್ಡಿ ಬೆಳೆಯುವುದರಿಂದ ರೋಗಿಯಾದವರು ವಕ್ರವಾಗಿ ನಡೆದಾಡಲು ಪ್ರಾರಂಭಿಸುತ್ತಾರೆ, ಕ್ರಮೇಣ ವಿಪರೀತ ನೋವಿನಿಂದ ನರಳುತ್ತಾರೆ, ನಿಲ್ಲಲು ಸಾಧ್ಯವಿಲ್ಲ, ಕುಳಿತುಕೊಳ್ಳಲು ಸಾಧ್ಯವಿಲ್ಲ, ಮಲಗಲು ಸಾಧ್ಯವಿಲ್ಲದಂತ ನರಕಯಾತನೆ.
ಇದರಿಂದ ಕುಬ್ಜರಾಗುತ್ತಾರೆ ಇಂತಹ 300ಕ್ಕೂ ಹೆಚ್ಚು ರೋಗ ಪೀಡಿತರು ಸಾಗರ ತಾಲ್ಲೂಕಿನಲ್ಲಿದ್ದಾರೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ಮತ್ತು ಎನ್ ಆರ್ ಪುರದಲ್ಲೂ ಈ ಕಾಯಿಲೆ ಪೀಡಿತರಿದ್ದಾರೆ.
ಸಾಗರ ಪಟ್ಟಣದಿಂದ ಕೆಳದಿಗೆ ಹೋದರೆ ಅಲ್ಲಿ೦ದ ಒಂದೆರೆಡು ಕಿ.ಮಿ. ದೂರದಲ್ಲಿ ಹಂದಿಗೋಡು ಹಳ್ಳಿ ಇದೆ, ಈ ಹಳ್ಳಿಯ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಈ ಕಾಯಿಲೆ ಪೀಡಿತರಿದ್ದಾರೆ ಆದರೆ ಇವರ ಪಕ್ಕದಲ್ಲೇ ಹವ್ಯಕ ಬ್ರಾಹ್ಮಣರ ಕಾಲೋನಿ ಇದೆ ಅಲ್ಲಿ ಈ ಕಾಯಿಲೆ ಯಾರಿಗೂ ಬಂದಿಲ್ಲ.
ಜಿನೆಟಿಕ್ ಕಾರಣದಿಂದ ಈ ಕಾಯಿಲೆ ವಂಶಪಾರಂಪರ್ಯವಾಗಿ ಬರುತ್ತೆ ಅಂತ ವೈದ್ಯರು ಹೇಳುತ್ತಾರೆ ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ ಬಂದು ಇಷ್ಟು ವಷ೯ವಾದರೂ ಇವರ ಕಾಯಿಲೆ ವಿಮೋಚನೆಗೆ ಸರಿಯಾದ ಚಾಲನೆ ಸಿಗದಿರುವುದು ನೋವಿನ ಸಂಗತಿ.
1995 ರಲ್ಲಿ ಜಿಲ್ಲಾ ಪಂಚಾಯತನ ಮೊದಲ ಸಭೆಯಲ್ಲಿ ಹಂದಿಗೋಡು ಕಾಯಿಲೆ ಬಗ್ಗೆ ನಾನು ಮಾತಾಡಿದಾಗ ಉಪಸ್ಥಿತರಿದ್ದ ಆಗಿನ ಉಪ ಮುಖ್ಯಮಂತ್ರಿ ಜೆ.ಹೆಚ್.ಪಟೇಲರು ನನಗೆ ಈವರೆಗೆ ಈ ಕಾಯಿಲೆ ಪೀಡಿತರ ಬಗ್ಗೆ ಮಾಹಿತಿ ಇದ್ದಿಲ್ಲ ಸೂಕ್ತ ಕ್ರಮ ತೆಗೆದು ಕೊಳ್ಳುವುದಾಗಿ ಭರವಸೆ ನೀಡಿದ್ದರು, ಈ ಸಭೆಯಲ್ಲಿ ಅವತ್ತು ಯಡೂರಪ್ಪ, ಈಶ್ವರಪ್ಪ ಕೂಡ ಇದ್ದರು.
1999ರಲ್ಲಿ ಈ ಬಗ್ಗೆ ಕೇಂದ್ರ ಸಕಾ೯ರದ ಸಹಾಯ ಪಡೆಯಲು ದೆಹಲಿಗೆ ನಿಯೋಗ ಒಂದನ್ನ ಒಯ್ದು ರಿಪ್ಪನ್ ಪೇಟೆ ಸಮೀಪದ ಬರುವೆ ಎಂಬ ಹಳ್ಳಿಯ ಶ್ರೀದರ ಎಂಬ ಹಂದಿಗೋಡು ಕಾಯಿಲೆ ಪೀಡಿತ ಯುವಕರಿoದ ಕೇಂದ್ರ ಸಚಿವರಿಗೆ ಮನವಿ ಅಪಿ೯ಸುವ ಕೆಲಸ ನಾವೆಲ್ಲ ಸಮಾನ ಮನಸ್ಕ ಮಿತ್ರರು ಮಾಡಿದ್ದೆವು.
2007 ರಲ್ಲಿ ಆಗಿನ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದರು.
ನಂತರ ನನಗೆ ಈ ಜನರ ಬಗ್ಗೆ ನನ್ನ ಮಿತಿಯಲ್ಲಿ ಏನೂ ಮಾಡಲಾಗಲಿಲ್ಲ ಆದ್ದರಿಂದ ಈ ಜನರ ಬಗ್ಗೆ ಸದಾ ಸಹಾಯ ಮಾಡುವ ಹಂದಿಗೋಡು ಚಂದ್ರಶೇಖರರಿಗೆ ನಿಮಗೇನು ಸಹಾಯ ಮಾಡಬಹುದು ಅಂತ ಕೇಳಿದಾಗ ಅವರು ನನಗೆ ಒಡಾಡಲು TVS ಒಂದನ್ನ ಸಕಾ೯ರ ನೀಡಿತ್ತು ಈಗ ವಾಪಾಸ್ ಪಡೆದಿದ್ದಾರೆ ಅಂದರು ನಾನು ಅವರಿಗೆ ಒಂದು TVS ಬೈಕ್ ಖರೀದಿಸಿ ನೀಡಿದ್ದು (2006)ಅವರು ಸದಾ ಸ್ಮರಿಸುತ್ತಾರೆ ಅದನ್ನ ಇವಾಗಲು ಹoದಿಗೋಡು ಕಾಯಿಲೆ ಪೀಡಿತರ ಪರವಾಗಿ ಉಪಯೋಗಿಸುತ್ತಾರೆ ಅದು ನನಗೆ ನೆಮ್ಮದಿ, ತೃಪ್ತಿ ತಂದಿದೆ.
SattaKing में कई बार हारा लेकिन आज Bikaner Super में जीतने का मज़ा ही अलग था। अब हर दिन सोच-समझकर नंबर लगाता हूँ।"
ReplyDeleteGali, Desawar, Faridabad – jitne bhi results chahiye hote hain sab ek jagah mil jate hain Satta King pe. Time bhi bachta hai aur hassle bhi nahi hoti.
ReplyDelete