# St MARY'S ISLAND MALPE#
# ಸೈOಟ್ ಮೆರೀಸ್ ಐಲ್ಯಾ೦ಡ್#
ಕರಾವಳಿಯ ಉಡುಪಿ ಸಮೀಪದ ಮಲ್ಪೆ ಬಂದರಿನ ಹಿಂಬಾಗ ಪ್ರವಾಸೋದ್ಯಮ ಇಲಾಖೆ ಸೈOಟ್ ಮೆರೀಸ್ ಐಲ್ಯಾಂಡ್ ಗೆ ಹೋಗಲು ಪ್ರವಾಸಿ ಬೋಟುಗಳಲ್ಲಿ ಪ್ರತಿ ಪ್ರವಾಸಿಗೆ ರೂಪಾಯಿ 250 ಪಡೆದು ಕರೆದೊಯುತ್ತಾರೆ, ಸಮುದ್ರದಲ್ಲಿ 20 ನಿಮಿಷ ಪ್ರಯಾಣದ ನಂತರ ಸಣ್ಣ ದೋಣಿಗೆ ಪ್ರಯಾಣಿಕರನ್ನ ವಗಾ೯ಯಿಸುತ್ತಾರೆ. (ಕಾರಣ ದೊಡ್ಡ ಬೋಟುನಿಂದ ಇಳಿಯಲು ಜಟ್ಟಿ ಇಲ್ಲಿ ನಿಮಾ೯ಣವಾಗಿಲ್ಲ).
40 ಎಕರೆ ಪ್ರದೇಶದ ಈ ಪ್ರಶಾಂತವಾದ ದ್ವೀಪ ವಾಸ್ಕೋಡಗಾಮ ಬಂದು ತಂಗಿದ್ದರಿಂದ ಅವರಿಂದ ಈ ಹೆಸರು ಬಂದ ಬಗ್ಗೆ ಮಾಹಿತಿ ಪಲಕವಿದೆ.
ಟಾಯಿಲೆಟ್, ಬಾತ್ ರೂಂ, ಉಪಹಾರ ಮಂದಿರವಿದೆ, ಅಲ್ಲಲ್ಲಿ ನೆರಳಿಗಾಗಿ ಕುಟಿರಗಳನ್ನ ನಿಮಿ೯ಸಿದ್ದಾರೆ.
ಪ್ರವಾಸಿಗಳಿಗೆ ಈಜಾಡಲು ಆಯ್ದ ಬೀಚ್ನಲ್ಲಿ ರಕ್ಷಣಕವಚಗಳು ಲಭ್ಯವಿದೆ, ಲೈಪ್ ಗಾಡ್೯ಗಳನ್ನ ನೇಮಿಸಿದ್ದಾರೆ.
ಹಾಗಾಗಿ ಶಾಲಾ ವಿದ್ಯಾಥಿ೯ಗಳನ್ನ ರಜಾ ಪ್ರವಾಸಕ್ಕೆ ಶಿಕ್ಷಕರು ಇಲ್ಲಿಗೆ ಕರೆದೊಯ್ತಾರೆ, ಅದ೯ ದಿನದ ಈ ಸಮುದ್ರಯಾನ, ದ್ವೀಪ ಪ್ರವಾಸ ಹೊಸ ಅನುಭವ ನೀಡುತ್ತದೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment